ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ,) ಸಂಪೂರ್ಣವಾಗಿ ಕರ್ನಾಟಕ ಸರಕಾರ ಸ್ವಾಮ್ಯದ ಎಲೆಕ್ಟ್ರಿಕ್ ಪರಿವರ್ತಕಗಳ ತಯಾರಿಕಾ ಕಂಪನಿಯಾಗಿದೆ. == ಇತಿಹಾಸ == ೧೯೩೩ ರಲ್ಲಿ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿಯು [] (ಭಾರತದ ಮೊದಲ ವಿದ್ಯುತ್ ಪರಿವರ್ತಕಗಳ ಕಂಪೆನಿ) ಸ್ಥಾಪನೆಗೊಂಡಿದ್ದು ವಿತರಕ ಪರಿವರ್ತಕಗಳ ಉತ್ಪಾದನೆಗೆ ಹೆಸರಾಗಿದ್ದು ಉತ್ಪಾದನಾ ಚಟುವಟಿಕೆಯ ಉನ್ನತೀಕರಣ ಹಾಗೂ ತಾಂತ್ರಿಕತೆಯ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟು ,೧೯೭೬ ನೇ ಇಸವಿಯಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯಾಗಿ (ಸಾರ್ವಜನಿಕ ಉದ್ದಿಮೆ) [ಕವಿಕಾ] ಪರಿವರ್ತನೆಗೊಂಡಿದೆ .ಕವಿಕಾವು ೨೫ ದಿಂದ ೫೦೦ ವಿತರಣಾ ಟ್ರಾನ್ಸ್ಫಾರ್ಮರ್ ಉತ್ಪಾದಿಸುತ್ತದೆ. ನಿರ್ದಿಷ್ಟ ಅಗತ್ಯತೆಗಳ ಪ್ರಕಾರ ಕಸ್ಟಮ್ ಬಿಲ್ಟ್ ,ವಿಶೇಷ ಟ್ರಾನ್ಸ್ಫಾರ್ಮರ್ಗಳಿಗಳನ್ನು ತಯಾರಿಸುತ್ತದೆ. == ಉತ್ಪನ್ನ ಪ್ರಕಾರಗಳು == ಸಿಂಗಲ್ ಫೇಸ್,೩ ಫೇಸ್ ಅಲ್ಯೂಮಿನಿಯಂ ವೌನ್ಡ್ ಟ್ರಾನ್ಸ್ಫಾರ್ಮರ್ (ಪೋಲ್ ಮೌಂಟಿಂಗ್),೩ ,೪,೫ ಸ್ಟಾರ್ ರೇಟೆಡ್ ಟ್ರಾನ್ಸ್ಫಾರ್ಮರ್ ,೩ ಫೇಸ್ ಕಾಪರ್ ವೌನ್ಡ್ಡೆಡ್ ಟ್ರಾನ್ಸ್ಫಾರ್ಮರ್,ನ್ಯೂಟ್ರಲ್ ಗ್ರೌಂಡಿಂಗ್ ಟ್ರಾನ್ಸ್ಫಾರ್ಮರ್, ಬೂಸ್ಟರ್ ಟ್ರಾನ್ಸ್ಫಾರ್ಮರ್ ಗಳನ್ನು ಉತ್ಪಾದಿಸುತ್ತದೆ. == ಉಲ್ಲೇಖಗಳು ==